ನನ್ನ ಬ್ಲಾಗ್ ಪಟ್ಟಿ

ಗುರುವಾರ, ಜುಲೈ 19, 2012

ಅಮೃತವಚನ 2 : Amritavachana 2

ಅಮೃತವಚನಗಳು:


37.
ಗುರುಪೂಜೆಯೆಂದರೆ ಸತ್ಯದ ಪೂಜೆ, ಜ್ಞಾನದ ಪೂಜೆ, ಅನುಭವದ ಪೂಜೆ, ವಿಚಾರದ ಪೂಜೆ
- ಸಾನೆ ಗುರೂಜಿ

38.
ನಮಗಿಂದು ಬೇಕಾಗಿರುವುದು ಜೀವನ ಸಂಗ್ರಾಮದಲ್ಲಿ ಹೋರಾಡುತ್ತಿರುವ ಯೋಧನ ಕೆಚ್ಚೆದೆಯ ಭಾವ. ಜೀವನವನ್ನು ಭೋಗೋದ್ಯಾನದಂತೆ ನೋಡುವ ವಿಲಾಸಿಯ ಭಾವವಲ್ಲ
- ಸ್ವಾಮಿ ವಿವೇಕಾನಂದ

39.
ಕಾರ್ಯವೊಂದರ ಗುರಿಯು ಶ್ರೇಷ್ಠವಾಗಿದ್ದರಷ್ಟೇ ಸಾಲದು. ಅದನ್ನು ಸಾಧಿಸಹೊರಡುವವರಲ್ಲಿ ಬಲಿಷ್ಠ ಹೃದಯಗಳೂ ಬಲವಾದ ತೋಳುಗಳೂ ಬೇಕು
- ಪರಮ ಪೂಜನೀಯ ಡಾಕ್ಟರ್‌ಜಿ

40.
ಸಮಾಜಕ್ಕೆ ಏನೂ ಕೊಡದೆ ಅದರಿಂದ ಕೇವಲ ಪಡೆಯುತ್ತಾ ಹೋದರೆ ಅದು ದುರ್ಬಲವಾಗುತ್ತದೆ. ಆದ್ದರಿಂದ ಸಮಾಜಕ್ಕೆ ಸಲ್ಲಿಸಬೇಕಾದುದು ಪ್ರತೀ ವ್ಯಕ್ತಿಯ ಆದ್ಯ ಕರ್ತವ್ಯ.
- ಪಂಡಿತ ದೀನದಯಾಳ ಉಪಾಧ್ಯಾಯ

41.
ಈ ನಾಡಿಗಿಂತ ನಮಗೆ ಪವಿತ್ರವಾದುದು ಇನ್ನಾವುದೂ ಇಲ್ಲ. ಇಲ್ಲಿನ ಧೂಳಿನ ಕಣ ಕಣವೂ, ಜಲದ ಹನಿ ಹನಿಯೂ, ಜಡಚೇತನಗಳೆಲ್ಲವೂ ನಮಗೆ ಪವಿತ್ರ.
- ಪರಮ ಪೂಜನೀಯ ಶ್ರೀ ಗುರೂಜಿ

42.
ವೀರಾತ್ಮರೇ, ಧೀರರಾಗಿ, ನೆಚ್ಚುಗೆಡದಿರಿ. ಭಾರತೀಯರು ನಾವು ಎಂದು ಹೆಮ್ಮೆ ತಾಳಿ. ಸಾರಿ ಹೇಳಿ, ಭಾರತೀಯರು ನಾವು, ಭಾರತೀಯರೆಲ್ಲ ನಮ್ಮ ಸಹೋದರರು.
- ಸ್ವಾಮಿ ವಿವೇಕಾನಂದ

43.
ರಾಷ್ಟ್ರವೇ ನಮ್ಮ ದೇವರು, ರಾಷ್ಟ್ರೀಯತೆಯೇ ನಮ್ಮ ಧರ್ಮ, ರಾಷ್ಟ್ರೀಯತೆಗೆ ಸಾವಿಲ್ಲ. ಯಾವುದೇ ಶಸ್ತ್ರಾಸ್ತ್ರಗಳಿಂದಲೂ ಅದನ್ನು ನಾಶಪಡಿಸಲು ಸಾಧ್ಯವಿಲ್ಲ.
- ಯೋಗಿ ಅರವಿಂದ

44.
ನಾವು ಮಾಡುವಂತಹ ಕಾರ್ಯದಲ್ಲಿ ನಮ್ಮ ಮನಸ್ಸು, ಹೃದಯದ ಭಾವನೆಗಳು ತುಂಬಿದ್ದಲ್ಲಿ, ಯಾಂತ್ರಿಕತೆ ಅನುಭವವುಂಟಾಗುವುದೇ ಇಲ್ಲ, ಬದಲಾಗಿ ವರ್ಷ ಕಳೆದಂತೆ ಅದರಲ್ಲಿ ಹುರುಪು-ಉತ್ಸಾಹ ಹೆಚ್ಚುತಲೇ ಇರುತ್ತದೆ.
- ಯಾದವರಾವ್ ಜೋಷಿ

45.
ಪರಿಶುದ್ಧತೆ, ತಾಳ್ಮೆ, ಸತತ ಪ್ರಯತ್ನ - ಇವು ಮೂರು ಜಯಕ್ಕೆ ಅತ್ಯಾವಶ್ಯಕ.
- ಸ್ವಾಮಿ ವಿವೇಕಾನಂದ

46.
ಸೂರ್ಯನು ಹೋದನೆಂದು ನೀವು ಅಳುತ್ತಾ ಕುಳಿತರೆ ನಕ್ಷತ್ರಗಳನ್ನು ನೋಡುವ ಭಾಗ್ಯವನ್ನು ಕಳೆದುಕೊಳ್ಳುತ್ತೀರಿ.
- ರವೀಂದ್ರನಾಥ ಠಾಗೋರ್

47.
ಅಯ್ಯಾ ಎಂದರೆ ಸ್ವರ್ಗ, ’ಎಲವೋ ಎಂದರೆ ನರಕ.
- ಬಸವಣ್ಣ

48.
ವಿದ್ಯಾಭ್ಯಾಸದ ತಿರುಳು ಇರುವುದು ಉತ್ತಮನಾದ ಜೀವನ ನಡೆಸುವುದರಲ್ಲಿ.
- ಮಹಾತ್ಮಾ ಗಾಂಧೀಜಿ

49.
ಭವಿಷ್ಯದ ಬಗ್ಗೆ ಹೆದರದಿರಿ. ಅದರ ನಿರ್ಮಾಣದಲ್ಲಿ ಆಸಕ್ತಿ ತಳೆಯಿರಿ. ಕನಸುಗಳನ್ನು ನನಸಾಗಿಸಿ, ಕಲ್ಪನೆಯನ್ನು ಕೃತಿ ರೂಪದಲ್ಲಿಳಿಸಿ.
- ಪಂಡಿತ ದೀನದಯಾಳ ಉಪಾಧ್ಯಾಯ

50.
ಒಂದು ಆದರ್ಶಕ್ಕೆ ವಿಧೇಯತೆ, ಪ್ರೀತಿ, ಏನು ಬೇಕಾದರೂ ಮಾಡುವ ಸಿದ್ಧತೆ - ಇವು ಮೂರು ನಿಮ್ಮಲ್ಲಿದ್ದರೆ ಯಾವುದೂ ನಿಮ್ಮನ್ನು ತಡೆಯಲಾರದು.
- ಸ್ವಾಮಿ ವಿವೇಕಾನಂದ

51.
ತುಕ್ಕು ಹಿಡಿದು ಅಳಿಯುವುದಕ್ಕಿಂತ ದುಡಿದು ಸವೆಯುವುದು ಮೇಲು.
- ಮೋಕ್ಷಗುಂಡಂ ವಿಶ್ವೇಶ್ವರಯ್ಯ

52.
ಯಾವ ವ್ಯಕ್ತಿಯ ನರನಾಡಿಗಳಲ್ಲಿ ತನ್ನ ರಾಷ್ಟ್ರದೊಡನೆ ಸಮರಸತೆಯ ಭಾವನೆಯು ಮಿಡಿಯುವುದಿಲ್ಲವೋ ಅಂಥವನಿಗೆ ಸರ್ವಾಂತರ್ಯಾಮಿಯಾದ ದೇವರು ಎಂದೂ ಸಿಗಲಾರ.
- ಸ್ವಾಮಿ ರಾಮತೀರ್ಥ

53.
ಎಲ್ಲಿ ಅಹಂಕಾರವಿದೆಯೋ ಅಲ್ಲಿ ಧ್ಯೇಯವಾದವು ಇರುವುದಿಲ್ಲ. ಮಾತ್ರವಲ್ಲ ಭಗವಂತನೂ ಇರುವುದಿಲ್ಲ.
- ದತ್ತೋಪಂತ ಠೇಂಗಡಿ

54.
ಶಾಖೆ ಎಂಬುದು ಕೇವಲ ಮಾತಿನ ಒಣ ಉಪದೇಶಗಳ ಕಂತೆಯಲ್ಲ; ಸಿದ್ಧಾಂತಗಳ ಸಜೀವ ನಡೆವಳಿಕೆ.
- ಪರಮ ಪೂಜನೀಯ ಶ್ರೀ ಗುರೂಜಿ

55.
ಸುಳ್ಳು ಹೇಳದಿರು. ಸತ್ಯಸಂಧನಾಗು. ವಿವೇಕದಿಂದ, ನಿರ್ಭೀತಿಯಿಂದ ಹಾಗೂ ಪ್ರೀತಿ ತುಂಬಿದ ಹೃದಯದಿಂದ ಸತ್ಯವನ್ನೇ ನುಡಿ.
- ಗೌತಮ ಬುದ್ಧ

56.
ಮನಸ್ಸಿನ ಕೊಳೆಯನ್ನು ತೊಳೆಯುವುದೇ ಧರ್ಮ.
- ಡಾ|| ಅಂಬೇಡ್ಕರ್

57.
ಸಂತತಿಯಿಂದಲ್ಲ, ಧನದಿಂದಲ್ಲ, ತ್ಯಾಗದಿಂದ ಮಾತ್ರ ಅಮೃತತ್ವವನ್ನು ಪಡೆಯಲು ಸಾಧ್ಯ.
- ಸ್ವಾಮಿ ವಿವೇಕಾನಂದ

58.
ಯಾರು ದೀನರಲ್ಲಿ, ದುರ್ಬಲರಲ್ಲಿ, ರೋಗಿಗಳಲ್ಲಿ ಶಿವನನ್ನು ನೋಡುವರೋ ಅವರೇ ನಿಜವಾದ ಶಿವನನ್ನು ಪೂಜಿಸುವವರು.
- ಸ್ವಾಮಿ ವಿವೇಕಾನಂದ

59.
ನಿನ್ನ ಮಾತು, ನಡತೆ ಹಾಗೂ ಸಾಧನೆ ಇವುಗಳಲ್ಲಿ ಪ್ರಾಮಾಣಿಕನಾಗಿರು. ಇದರಿಂದ ನೀನು ಧನ್ಯನಾಗುವೆ.
- ಶಾರದಾ ಮಾತೆ

60.
ದೊಡ್ಡ ಮನಸ್ಸಿನಿಂದ ಮಾಡಿದ ಸಣ್ಣ ಕಾರ್ಯಗಳೂ ಸಣ್ಣ ಮನಸ್ಸಿನಿಂದ ಮಾಡಿದ ದೊಡ್ಡ ಕಾರ್ಯಗಳಿಗಿಂತ ಎಷ್ಟೋ ಶ್ರೇಷ್ಠವಾದವು
- ಕುವೆಂಪು

61.
"ಹೇ ಗೌರೀನಾಥ, ಹೇ ಜಗನ್ಮಾತೆ, ಪೌರುಷವನ್ನು ಎಮಗೆ ದಯಪಾಲಿಸು. ಹೇ ಸರ್ವಶಕ್ತಿಶಾಲಿನಿ, ನಮ್ಮ ದೌರ್ಬಲ್ಯವನ್ನು ದಹಿಸು, ಕ್ಲೈಬ್ಯವನ್ನು ಹೋಗಲಾಡಿಸು. ನಮ್ಮ ಷಂಡತನವನ್ನು ತೊಲಗಿಸು, ಪುರುಷಸಿಂಹರನ್ನಾಗಿ ಮಾಡು."
- ಸ್ವಾಮಿ ವಿವೇಕಾನಂದ

62.
ಸರ್ವ ಪ್ರಯತ್ನದಿಂದ ತನ್ನ ದುರ್ಬಲತೆಯನ್ನು ತೊಡೆದು ಹಾಕಿ ಬಲಿಷ್ಠವಾಗುವುದೇ ದುರ್ಬಲ ಸಮಾಜವೊಂದರ ಅತಿ ಶ್ರೇಷ್ಠ ಕರ್ತವ್ಯ.
- ಪರಮ ಪೂಜನೀಯ ಡಾಕ್ಟರ್‌ಜಿ

63.
ಈ ನಶ್ವರ ಜಗತ್ತಿನಲ್ಲಿ ಎಲ್ಲವೂ ನಶಿಸಬಹುದು. ಆದರೆ ಭಾವನೆಗಳು, ಕನಸುಗಳು, ವಿಚಾರಗಳು ಎಂದೂ ಸಾಯಲಾರವು.
- ನೇತಾಜಿ ಸುಭಾಷ್‌ಚಂದ್ರ ಬೋಸ್

64.
ಹುಡುಕಿ ಹುಡುಕಿ ಒಳ್ಳೆಯ ಮಾತನ್ನೇ ಆಡಬೇಕು. ಅದನ್ನು ಹಿತವಾಗುವಂತೆ ಹೇಳಬೇಕು. ಇದೇ ಧರ್ಮ
- ತಿರುವಳ್ಳೂವರ್

ಅಮೃತವಚನ 1 : Amritavachana 1

ಅಮೃತವಚನಗಳು:

1.
ಜಾಗೃತನಾಗು. ಆಲಸ್ಯವನ್ನು ಕಿತ್ತೊಗೆ. ಧರ್ಮಮಾರ್ಗದಲ್ಲೇ ನಡೆ. ಅಧರ್ಮವನ್ನು ಎಂದೂ ಆಚರಿಸದಿರು.
- ಗೌತಮ ಬುದ್ಧ

2.
ರಾಷ್ಟ್ರವು ಬಲಶಾಲಿಯಾಗುವುದು ಸಣ್ಣಪುಟ್ಟ ವಿಚಾರಗಳನ್ನುಳ್ಳ ದೊಡ್ಡ ದೊಡ್ಡ ವ್ಯಕ್ತಿಗಳಿಂದಲ್ಲ; ದೊಡ್ಡ ದೊಡ್ಡ ವಿಚಾರಗಳನ್ನುಳ್ಳ ಸಣ್ಣ ಸಣ್ಣ ವ್ಯಕ್ತಿಗಳಿಂದ.
- ಸ್ವಾಮಿ ರಾಮತೀರ್ಥ

3.
ನಿನ್ನ ಮುಖ ಪ್ರಕಾಶಮಾನವಾಗಬೇಕೇ? ಸದ್ಗುಣಗಳ ನೀರಿನಲ್ಲಿ ಸ್ನಾನ ಮಾಡು. ಸತ್ಯವೆಂಬ ಸುಗಂಧವನ್ನು ಮೈಗೆ ಹಚ್ಚಿಕೋ.
- ಗುರು ನಾನಕ್

4.
ಮನುಷ್ಯನಾಗಿ ಹುಟ್ಟಿದ ಬಳಿಕ ನಿನ್ನ ಹಿಂದೆ ಅಳಿಸಲಾಗದ ಒಳ್ಳೆಯ ಗುರುತುಗಳನ್ನು ಬಿಟ್ಟು ಇಲ್ಲಿಂದ ನಿರ್ಗಮಿಸು.
- ಸ್ವಾಮಿ ವಿವೇಕಾನಂದ

5.
ಎನನ್ನೂ ಬಯಸಬೇಡಿ. ನೀವು ಹೆಚ್ಚು ಕೊಟ್ಟಷ್ಟೂ ನಿಮಗೆ ಹೆಚ್ಚು ಹೆಚ್ಚು ಬರುತ್ತದೆ.
- ಸ್ವಾಮಿ ವಿವೇಕಾನಂದ

6.
ಭಕ್ತಿ ಎಂದರೆ ವ್ಯಾಪಾರವಲ್ಲ. ಅದು ಸಂಪೂರ್ಣ ಆತ್ಮಾರ್ಪಣೆ. ಅದು ಒಮ್ಮುಖದ ದಾರಿ. ಅರ್ಪಿಸುವುದಷ್ಟೇ ನಮ್ಮ ಕೆಲಸ.
- ಪರಮ ಪೂಜನೀಯ ಶ್ರೀ ಗುರೂಜಿ

7.
ಮೊದಲು ನಿನ್ನನ್ನು ನೀ ತಿಳಿ. ಅನಂತರ ದೇವರನ್ನು ನೀನು ತಿಳಿಯುವೆ.
- ರಾಮಕೃಷ್ಣ ಪರಮಹಂಸ

8.
ರಾಷ್ಟ್ರವೇ ನಮ್ಮ ದೇವರು. ರಾಷ್ಟ್ರೀಯತೆಯೇ ನಮ್ಮ ಧರ್ಮ. ರಾಷ್ಟ್ರೀಯತೆಗೆ ಸಾವಿಲ್ಲ. ಯಾವುದೇ ಶಸ್ತ್ರಾಸ್ತ್ರಗಳಿಂದಲೂ ಅದನ್ನು ನಾಶಪಡಿಸಲು ಸಾಧ್ಯವಿಲ್ಲ.
- ಯೋಗಿ ಆರವಿಂದ

9.
ಶೀಲವೆಂಬುದು ಅಲುಗದ ಆಧಾರ. ಅದನ್ನು ಹಿಡಿದು ನಿಂತವನನ್ನು ಜಗತ್ತಿನ ಯಾವ ಶಕ್ತಿಯೂ ಕದಲಿಸಲಾರದು.
- ಡಾ|| ರಾಜೇಂದ್ರ ಪ್ರಸಾದ್

10.
ಸರ್ವಪ್ರಯತ್ನದಿಂದ ತನ್ನ ದುರ್ಬಲತೆಯನ್ನು ತೊಡೆದುಹಾಕಿ ಬಲಿಷ್ಠವಾಗುವುದೇ ದುರ್ಬಲ ಸಮಾಜವೊಂದರ ಅತಿ ಶ್ರೇಷ್ಠ ಕರ್ತವ್ಯ.
- ಪರಮ ಪೂಜನೀಯ ಡಾಕ್ಟರ್‌ಜಿ

11.
ಈ ದೇಶ ಜೀವಂತ. ಚೇತನಾಮಯ. ಇದು ಬರಿಯ ಕಲ್ಲು ಮಣ್ಣಿನ ರಾಶಿ ಅಲ್ಲ, ಜಗಜ್ಜನನಿಯ ಮೂರ್ತಸ್ವರೂಪ.
- ಯೋಗಿ ಅರವಿಂದ

12.
ಹೇ ಭಗವಂತ, ನಾನು ಮುಕ್ತಿಯನ್ನು ಬೇಡುವುದಿಲ್ಲ. ನಾನು ಪ್ರೀತಿಸುವ ಈ ಜನರಿಗಾಗಿ ಬದುಕುವಂತೆ, ಶ್ರಮಿಸುವಂತೆ ನನಗೆ ಅವಕಾಶ ಮಾಡಿಕೊಡು.
- ಯೋಗಿ ಅರವಿಂದ

13.
ಒಂದೇ ದೇಶ, ಒಬ್ಬನೇ ದೇವರು, ಒಂದೇ ಜಾತಿ, ಒಂದು ಮನ. ಸಹೋದರರೆಲ್ಲ ಒಂದೇ ಕುಲ. ಭೇದ ಬೇಡ.
- ವೀರ ಸಾವರ್ಕರ್

14.
ಈ ನಾಡಿಗಿಂತ ನಮಗೆ ಪವಿತ್ರವಾದುದು ಇನ್ನಾವುದೂ ಇಲ್ಲ. ಇಲ್ಲಿನ ಧೂಳಿನ ಕಣಕಣವೂ , ಜಲದ ಹನಿ ಹನಿಯೂ, ಜಡಚೇತನಗಳೆಲ್ಲವೂ ನಮಗೆ ಪವಿತ್ರ.
- ಪರಮ ಪೂಜನೀಯ ಶ್ರೀ ಗುರೂಜಿ

15.
ಸಣ್ಣ ಸಣ್ಣ ಕೆಲಸಗಳ ಬಗ್ಗೆ ತುಂಬಾ ಗಮನವಹಿಸಿ. ಆಗ ಅಗಾಧ ಕಾರ್ಯಗಳು ತನ್ನಿಂದ ತಾನೇ ಆಗಿಬಿಡುತ್ತವೆ.
- ಪರಮ ಪೂಜನೀಯ ಶ್ರೀ ಗುರೂಜಿ

16.
ಅನ್ಯಾಯದೊಡನೆ ರಾಜಿ ಮಾಡಿಕೊಳ್ಳುವುದಕ್ಕಿಂತ ಹೆಚ್ಚಿನ ಅಪರಾಧ ಇನ್ನೊಂದಿಲ್ಲ.
- ಸುಭಾಷ್ ಚಂದ್ರ ಬೋಸ್

17.
ಕಣ್ಣಿಗೆ ಕಾಣುವ ನಿನ್ನ ಸೋದರರನ್ನು ಪ್ರೀತಿಸದ ನೀನು ಕಾಣದ ದೇವರನ್ನು ಹೇಗೆ ಪ್ರೀತಿಸಬಲ್ಲೆ.
- ಸ್ವಾಮಿ ವಿವೇಕಾನಂದ

18.
ಸತ್ಯದ ನಿರಂತರ ಅನ್ವೇಷಣೆಯೇ ಹಿಂದು ಧರ್ಮ.
- ಮಹಾತ್ಮಾ ಗಾಂಧೀಜಿ

19.
ನಿಜವಾದ ದೇಶಭಕ್ತನು ತನ್ನೆಲ್ಲಾ ದೇಶವಾಸಿಗಳಲ್ಲಿ ತನ್ನನ್ನೂ, ತನ್ನಲ್ಲಿ ಎಲ್ಲಾ ದೇಶವಾಸಿಗಳನ್ನು ನೋಡುತ್ತಾನೆ.
- ಪಂಡಿತ ದೀನದಯಾಳ ಉಪಾಧ್ಯಾಯ

20.
ಶ್ರದ್ಧೆ ಮತ್ತು ಭಕ್ತಿ ಇಲ್ಲದ ಕೆಲಸವು ಸುವಾಸನೆ ಇಲ್ಲದ ಕೃತಕ ಹೂವಿನಂತೆ.
- ಸ್ವಾಮಿ ಚಿನ್ಮಯಾನಂದ

21.
ಮನುಷ್ಯರೆಲ್ಲ ಒಂದೇ ಜಾತಿ. ಎಲ್ಲರೂ ದೇವರ ಮಕ್ಕಳೇ.
- ನಾರಾಯಣ ಗುರು

22.
ಪರಿಸ್ಥಿತಿಯನ್ನು ಕಾಲಕೆಳಗೆ ಮೆಟ್ಟಿ ನಿಲ್ಲಬಲ್ಲವನೇ ಪುರುಷನಾಗಲು ತಕ್ಕವನು. ಆತ್ಮಬಲಿದಾನಕ್ಕೆ ಸಿದ್ಧರಾಗಿ. ಮೃತ್ಯುವನ್ನು ಕಡೆಗಣಿಸಿ. ನಿರ್ಭಯತೆ ಗಳಿಸಿ. ಭಾರತವೊಂದೇ ನಿಮ್ಮ ಆರಾಧ್ಯ ದೈವ ಆಗಲಿ.
- ಭಗಿನಿ ನಿವೇದಿತಾ

23.
ಎಲ್ಲಿ ಅಹಂಕಾರವಿದೆಯೋ ಅಲ್ಲಿ ಧ್ಯೇಯವಾದವು ಇರುವುದಿಲ್ಲ ಮಾತ್ರವಲ್ಲ. ಭಗವಂತನೂ ಇರುವುದಿಲ್ಲ.
- ದತ್ತೋಪಂತ ಠೇಂಗಡಿ

24.
ಯಾವುದೇ ವೃತ್ತಿ - ವ್ಯವಹಾರಗಳಲ್ಲಿ ಯಶಸ್ವಿಯಾಗುವುದು ವ್ಯಕ್ತಿಯ ಸಾಮರ್ಥ್ಯ, ವ್ಯಕ್ತಿತ್ವ, ಪ್ರಾಮಾಣಿಕತೆ ಮತ್ತು ಮುಂದಾಲೋಚನೆಗಳನ್ನು ಆಧರಿಸಿರುತ್ತದೆ.
- ಮೋಕ್ಷಗುಂಡಂ ವಿಶ್ವೇಶ್ವರಯ್ಯ

25.
ಅಸ್ಪೃಶ್ಯತೆ ತಪ್ಪಲ್ಲವಾದಲ್ಲಿ ಜಗತ್ತಿನಲ್ಲಿ ಇನ್ನಾವುದೂ ತಪ್ಪಲ್ಲ.
- ಶ್ರೀ ಬಾಳಾಸಾಹೇಬ್ ದೇವರಸ್

26.
ಪರರಿಗೆ ಸಂತೋಷ, ಶಾಂತಿಯನ್ನುಂಟು ಮಾಡುವ ಒಂದು ಮಾತೂ ಅತ್ಯಂತ ಶ್ರೇಷ್ಠ.
- ಗೌತಮ ಬುದ್ಧ

27.
ಕೇವಲ ಪ್ರಾರ್ಥಿಸುವ ತುಟಿಗಳಿಗಿಂತ ಸೇವೆ ಮಾಡುವ ಕೈಗಳು ನೂರುಪಟ್ಟು ಮೇಲು
- ಮಹಾತ್ಮಾ ಗಾಂಧೀಜಿ

30.
ನಮ್ಮದನ್ನು ಕೈಬಿಟ್ಟು ಪರದೇಶದ ಸಂಗತಿಗಳಿಗಾಗಿ ಹಾತೊರೆಯುವುದು ಸೋಮಾರಿ ಮತ್ತು ಭಿಕಾರಿಗಳ ಲಕ್ಷಣ.
- ರವೀಂದ್ರನಾಥ ಠಾಗೋರ್

31.
ಇನ್ನೊಬ್ಬರನ್ನು ಮಾತಿನಿಂದ ಹಿಂಸಿಸಬಾರದು, ಅಪ್ರಿಯವಾದುದನ್ನು ಆಡಬಾರದು. ಕಠಿಣ ಮಾತುಗಳನ್ನೇ ಆಡುವುದರಿಂದ ಸ್ವಭಾವವು ಕಠೋರವಾಗುತ್ತದೆ.
- ಶಾರದಾ ಮಾತೆ

32.
ಹಿಂದುತ್ವವನ್ನು ಬಿಟ್ಟು ಭಾರತದ ರಾಷ್ಟ್ರೀಯತೆಯು ಬದುಕಿರಲು ಸಾಧ್ಯವಿಲ್ಲ.
- ಮದನಮೋಹನ ಮಾಳವೀಯ

33.
ವ್ಯಕ್ತಿಯ ಜಾತಿ, ಪಂಥ, ಕುಲವನ್ನು ಯೋಚಿಸದೆ ಅವನಲ್ಲಿರುವ ದೈವೀ ಅಂಶವನ್ನು ಗುರುತಿಸಿ ಅವನ ಸೇವೆ ಮಾಡುವವರಿಗೆ ದೇವರು ಪ್ರಸನ್ನನಾಗುತ್ತನೆ.
- ಸ್ವಾಮಿ ವಿವೇಕಾನಂದ

34.
ಕತ್ತಲು, ಕತ್ತಲು... ಎಂದು ಕೂಗತೊಡಗಿದರೆ ಕತ್ತಲು ಹೋದೀತೇನು? ಅದೇ, ದೀಪ ತನ್ನಿ; ಕತ್ತಲು ಹೇಗೆ ಮಾಯವಾಗುತ್ತದೆ ನೋಡಿ ! ಮನುಷ್ಯರನ್ನು ಸುಧಾರಿಸುವ ರಹಸ್ಯವೇ ಇದು.
- ಸ್ವಾಮಿ ವಿವೇಕಾನಂದ

35.
ತಾನೂ ಉತ್ತಮನಾಗಿ ಮತ್ತೊಬ್ಬರನ್ನೂ ಉತ್ತಮನ್ನಾಗಿ ಮಾಡುವವನೇ ಉತ್ತಮ ಮಾನವನಾಗುತ್ತಾನೆ.
- ಸ್ವಾಮಿ ವಿವೇಕಾನಂದ

36.
ಚಲಿಸುವುದೇ ಬಾಳು, ನಿಲ್ಲುವುದು ಸಾವು.
- ಕುವೆಂಪು