ನನ್ನ ಬ್ಲಾಗ್ ಪಟ್ಟಿ

ಶನಿವಾರ, ಏಪ್ರಿಲ್ 27, 2013

ಅಮೃತವಚನ 3 : Amritavachana 3

ಅಮೃತವಚನಗಳು:


65.
ಸಮಾಜಕ್ಕಾಗಿ ಸುಖದ ಎಲ್ಲ ಬಯಕೆಗಳನ್ನು ತ್ಯಜಿಸಲು ಸಮರ್ಥರಾದಾಗ ನೀವು ಬುದ್ಧನಾಗುವಿರಿ. ಆಗಲೇ ನೀವು ನಿಜವಾದ ಅರ್ಥದಲ್ಲಿ ಸ್ವತಂತ್ರರು.
- ಸ್ವಾಮಿ ವಿವೇಕಾನಂದ

66.
ವೀರರಾದವರು ನ್ಯಾಯವಾದ ದಾರಿಯಿಂದ ಒಂದು ಹೆಜ್ಜೆಯನ್ನೂ ಆಚೆ ಇಡುವುದಿಲ್ಲ.
- ಭರ್ತೃಹರಿ

67.
ಈ ದೇಶ ಜೀವಂತ. ಚೇತನಾಮಯ. ಇದು ಬರಿಯ ಕಲ್ಲು ಮಣ್ಣಿನ ರಾಶಿ ಅಲ್ಲ, ಜಗಜ್ಜನನಿಯ ಮೂರ್ತಸ್ವರೂಪ.
- ಯೋಗಿ ಅರವಿಂದ

68.
ಶೀಲವಿಲ್ಲದ ಶಿಕ್ಷಣ, ತತ್ವರಹಿತ ರಾಜಕಾರಣ, ಮಾನವೀಯತೆ ಇಲ್ಲದ ವಿಜ್ಞಾನ, ನೀತಿಯಿಲ್ಲದ ವ್ಯಾಪಾರ - ಇವುಗಳಿಂದ ಅಪಾಯ ನಿಶ್ಚಿತ.
- ಚಾಣಕ್ಯ

69.
ಯಾವನು ತಾನು ಸ್ವೀಕರಿಸಿದ ತತ್ವದ ದಿಕ್ಕಿನಲ್ಲೇ ತನ್ನ ಬದುಕಿನ ಪ್ರತಿಯೊದು ಹೆಜ್ಜೆಯನ್ನು ಹಾಕುತ್ತಾನೋ, ಅಂಥವನೇ ವಂದನೆಗೆ, ಅನುಕರಣೆಗೆ ಯೋಗ್ಯ.
- ಪರಮ ಪೂಜನೀಯ ಡಾಕ್ಟರ್‌ಜಿ

70.
ಭಕ್ತಿ ಎಂದರೆ ವ್ಯಾಪಾರವಲ್ಲ. ಅದು ಸಂಪೂರ್ಣ ಆತ್ಮಾರ್ಪಣೆ. ಅದು ಒಮ್ಮುಖದ ದಾರಿ. ಅರ್ಪಿಸುವುದಷ್ಟೇ ನಮ್ಮ ಕೆಲಸ.
- ಪರಮ ಪೂಜನೀಯ ಶ್ರೀ ಗುರೂಜಿ

71.
ನಮ್ಮೆಲ್ಲ ಪ್ರತಿಭೆ, ಸಂಪತ್ತುಗಳು ನಿಜವಾಗಿ ನಮಗೆ ಸೇರಿದ್ದಲ್ಲ. ಸಮಾಜದೇವನ ಪೂಜೆಗೆ ಅವು ಸಾಧನಗಳು ಮಾತ್ರ.
- ಪರಮ ಪೂಜನೀಯ ಶ್ರೀ ಗುರೂಜಿ

72.
ಸಮಾಜಕ್ಕೆ ಏನೂ ಕೊಡದೆ ಅದರಿಂದ ಕೇವಲ ಪಡೆಯುತ್ತಾ ಹೋದರೆ ಅದು ದುರ್ಬಲವಾಗುತ್ತದೆ. ಆದ್ದರಿಂದ ಸಮಾಜಕ್ಕೆ ಸಲ್ಲಿಸಬೇಕಾದುದು ಪ್ರತೀ ವ್ಯಕ್ತಿಯ ಆದ್ಯ ಕರ್ತವ್ಯ.
- ಪಂಡಿತ ದೀನದಯಾಳ ಉಪಾಧ್ಯಾಯ

73.
ಶಾಖೆ ಎಂಬುದು ಕೇವಲ ಮಾತಿನ, ಒಣ ಉಪದೇಶಗಳ ಕಂತೆಯಲ್ಲ, ಸಿದ್ಧಾಂತಗಳ ಸಜೀವ ನಡವಳಿಕೆ.
- ಪರಮ ಪೂಜನೀಯ ಶ್ರೀ ಗುರೂಜಿ

74.
ಜಗತ್ತಿನಲ್ಲಿ ಸಂಘಟನೆಯಿಂದಲೇ ಶಕ್ತಿ. ಅದರ ಬಲದ ಮೇಲೆ ಎಲ್ಲ ಸಮಸ್ಯೆಗಳನ್ನೂ ಪರಿಹರಿಸಬಹುದು. ಇದು ನನ್ನ ದೃಢವಾದ ನಂಬಿಕೆ.
- ಪರಮ ಪೂಜನೀಯ ಡಾಕ್ಟರ್‌ಜಿ

75.
ರಾಷ್ಟ್ರವೇ ನಮ್ಮ ದೇವರು. ರಾಷ್ಟ್ರೀಯತೆಯೇ ನಮ್ಮ ಧರ್ಮ. ರಾಷ್ಟ್ರೀಯತೆಗೆ ಸಾವಿಲ್ಲ. ಯಾವುದೇ ಶಸ್ತ್ರಾಸ್ತ್ರಗಳಿಂದಲೂ ಅದನ್ನು ನಾಶಪಡಿಸಲು ಸಾಧ್ಯವಿಲ್ಲ.
- ಯೋಗಿ ಅರವಿಂದ

76.
ಮನುಷ್ಯರೆಲ್ಲ ಒಂದೇ ಜಾತಿ. ಎಲ್ಲರೂ ದೇವರ ಮಕ್ಕಳೇ.
- ನಾರಾಯಣ ಗುರು

77.
ಓ ಕೇಳಿಲ್ಲಿ - ಹಿಂದು ಎನ್ನುವ ಉಚ್ಚಾರ ಮಾತ್ರದಿಂದ ನಿನ್ನಲ್ಲಿ ಶಕ್ತಿಯ ವಿದ್ಯುತ್‍ಸಂಚಾರ ಆಗಬೇಕು. ಆಗ ಮಾತ್ರ, ಹಾಗಾದಾಗ ಮಾತ್ರ, ನೀನೊಬ್ಬ ನಿಜವಾದ ಹಿಂದು.
- ಸ್ವಾಮಿ ವಿವೇಕಾನಂದ

78.
ಒಂದು ಧ್ಯೇಯಕ್ಕೆ ಹುಚ್ಚಾದವನೇ ಬೆಳಕು ಕಂಡಾನು. ಅಲ್ಲಷ್ಟು ಇಲ್ಲಷ್ಟು ಕೈಯಾಡಿಸುವವನು ಎಂದಿಗೂ ಏನನ್ನೂ ಸಾಧಿಸಲಾರ.
- ಸ್ವಾಮಿ ವಿವೇಕಾನಂದ

79.
ಸೂರ್ಯನು ಹೋದನೆಂದು ನೀವು ಅಳುತ್ತಾ ಕುಳಿತರೆ ನಕ್ಷತ್ರಗಳನ್ನೂ ನೋಡುವ ಭಾಗ್ಯವನ್ನೂ ಕಳೆದುಕೊಳ್ಳುತ್ತೀರಿ.
- ರವೀಂದ್ರನಾಥ ಠಾಗೋರ್

80.
ಕೋಪವನ್ನು ಪ್ರೀತಿಯಿಂದ, ಕೆಡುಕನ್ನು ಒಳಿತಿನಿಂದ, ದುರಾಸೆಯನ್ನು ಉದಾರತೆಯಿಂದ ಅಸತ್ಯವನ್ನು ಸತ್ಯದಿಂದ ಜಯಿಸಿ.
- ಸ್ವಾಮಿ ಚಿನ್ಮಯಾನಂದ

81.
ರಾಮರಾಜ್ಯವೇ ಸ್ವರಾಜ್ಯದ ಆದರ್ಶ. ರಾಮರಾಜ್ಯವೆಂದರೆ ಧರ್ಮದ ರಾಜ್ಯ. ನ್ಯಾಯದ ರಾಜ್ಯ. ಪ್ರೇಮದ ರಾಜ್ಯ.
- ಮಹಾತ್ಮಾ ಗಾಂಧಿ

82.
ಒಳ್ಳೆಯವರೊಂದಿಗೆ ಸಹಕರಿಸುವುದು ಕರ್ತ್ಯವ್ಯವೇ ಆಗಿದೆ. ಅಂತೆಯೇ ಕೆಡುಕರಿಗೆ ಸಹಕಾರ ನೀಡದಿರುವುದೂ ಕರ್ತವ್ಯವೇ.
- ಮಹಾತ್ಮಾ ಗಾಂಧಿ

83.
ದೇಶಕ್ಕಾಗಿ ಬಲಿದಾನ ಮಾಡುವವರು ಶ್ರೇಷ್ಠರು. ಆದರೆ ಸಮಾಜಕ್ಕಾಗಿ ಬದುಕುವವರು ಅವರಿಗಿಂತ ಶ್ರೇಷ್ಠರು.
- ಪಂಡಿತ ದೀನದಯಾಳ ಉಪಾಧ್ಯಾಯ

84.
ಭವಿಷ್ಯದ ಬಗ್ಗೆ ಹೆದರದಿರಿ. ಅದರ ನಿರ್ಮಾಣದಲ್ಲಿ ಆಸಕ್ತಿ ತಳೆಯಿರಿ. ಕನಸುಗಳನ್ನು ನನಸಾಗಿಸಿ. ಕಲ್ಪನೆಯನ್ನು ಕೃತಿರೂಪದಲ್ಲಿಳಿಸಿ.
- ಪಂಡಿತ ದೀನದಯಾಳ ಉಪಾಧ್ಯಾಯ

85.
ತುಕ್ಕು ಹಿಡಿದು ಅಳಿಯುವುದಕ್ಕಿಂತ ದುಡಿದು ಸವೆಯುವುದು ಮೇಲು.
- ಮೋಕ್ಷಗುಂಡಂ ವಿಶ್ವೇಶ್ವರಯ್ಯ

86.
ಸ್ವಕರ್ಮವನ್ನು ನಿಷ್ಠೆಯಿಂದ ಮಾಡುವುದೇ ಭಗವಂತನ ಅರ್ಚನೆ.
- ಹೂ.ವೆ. ಶೇಷಾದ್ರಿ

87.
ಹುಡುಕಿ ಹುಡುಕಿ ಒಳ್ಳೆಯ ಮಾತನ್ನೇ ಆಡಬೇಕು. ಅದನ್ನು ಹಿತವಾಗುವಂತೆ ಹೇಳಬೇಕು. ಇದೇ ಧರ್ಮ.
- ತಿರುವಳ್ಳುವರ್

88.
’ಹಿಂದು ಜನಾಂಗವಿಲ್ಲದಿದ್ದರೆ ಹಿಂದುಸ್ಥಾನಕ್ಕೆ ಯಾವ ಅರ್ಥವೂ ಇಲ್ಲ’ ಎನ್ನುವ ಸತ್ಯವನ್ನು ಜನಮಾನಸದಲ್ಲಿ ಅಂಕಿತಗೊಳಿಸುವುದೇ ನಮ್ಮ ಏಕಮೇವ ಕೆಲಸ.
- ವಂದನೀಯ ಲಕ್ಷ್ಮಿಬಾಯಿ ಕೇಳ್ಕರ್

89.
ಅಜ್ಞಾನಿಗಳೊಡನೆ ಅಧಿಕ ಸ್ನೇಹಕ್ಕಿಂತ ಸುಜ್ಞಾನಿಗಳೊಡನೆ ಜಗಳವಾಡುವುದು ಲೇಸು.
- ಕನಕದಾಸ

90.
ಯಾವುದು ತನಗೆ ಒಳಿತಲ್ಲವೋ ಅದನ್ನು ಇತರರಿಗೂ ಮಾಡಕೂಡದು. ಇದೇ ಸಮಸ್ತ ಧರ್ಮದ ಸಾರ. ಇದೇ ಸಮಸ್ತ ಧರ್ಮದ ಸಾರ.
- ದೇವಲ ಋಷಿ

91.
ಯಾರಿಗೆ ಕಟ್ಟು ಶಕ್ತಿ ಇಲ್ಲವೋ ಅವನಿಗೆ ಹಾಳು ಮಾಡುವ ಅಧಿಕಾರವೂ ಇಲ್ಲ.
- ರವೀಂದ್ರನಾಥ ಠಾಗೋರ್

92.
ದುಷ್ಟ ಮಾನವನನ್ನು ದೇವರು ಸೃಷ್ಟಿಯೇ ಇಲ್ಲ. ಆದರೆ ಮನುಷ್ಯ ತನ್ನನ್ನು ದೇವರಿಂದ ಬೇರ್ಪಡಿಸಿಕೊಂಡಾಗ ಮಾತ್ರ ದುಷ್ಟನಾಗುತ್ತಾನೆ.
- ಶಾರದಾ ಮಾತೆ

93.
ಹಿಂದುತ್ವವನ್ನು ಬಿಟ್ಟು ಭಾರತದ ರಾಷ್ಟ್ರೀಯತೆಯು ಬದುಕಿರಲು ಸಾಧ್ಯವಿಲ್ಲ.
- ಮದನ ಮೋಹನ ಮಾಲವೀಯ

94.
ಆತ್ಮವಿಶ್ವಾಸಕ್ಕಿಂತ ಹೆಚ್ಚಿನ ಶಕ್ತಿ ಬೇರೊಂದಿಲ್ಲ. ಆ ಶಕ್ತಿಯ ವಿಶ್ವಾಸವಿದ್ದಲ್ಲೇ ಬಲವಿದೆ. ಎಷ್ಟೇ ಶಕ್ತಿಯಿರಲಿ, ವಿಶ್ವಾಸವಿಲ್ಲದಿದ್ದರೆ ಅಂತಹ ನಿರ್ಬಲ ಬೇರೊಬ್ಬನಿಲ್ಲ.
- ಸ್ವಾಮಿ ವಿವೇಕಾನಂದ

95.
ಯಾರ ಹೃದಯವು ದೀನರಿಗೋಸ್ಕರ ಮರುಗುವುದೋ ಅವರನ್ನು ಮಹಾತ್ಮರೆಂದು ಕರೆಯುತ್ತೇನೆ.
- ಸ್ವಾಮಿ ವಿವೇಕಾನಂದ

96.
ಮೊದಲು ನಿಮ್ಮನ್ನು ನೀವು ಜಯಿಸಿ. ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ.
- ಸ್ವಾಮಿ ವಿವೇಕಾನಂದ

97.
ಇತರರಿಗಾಗಿ ಮಾಡುವ ಅತ್ಯಂತ ಚಿಕ್ಕ ಕೆಲಸವೂ ನಮ್ಮ ಅಂತಃಶಕ್ತಿಯನ್ನು ಜಾಗೃತಗೊಳಿಸುತ್ತದೆ.
- ಸ್ವಾಮಿ ವಿವೇಕಾನಂದ

98.
ಈ ನಶ್ವರ ಜಗತ್ತಿನಲ್ಲಿ ಎಲ್ಲವೂ ನಶಿಸಬಹುದು. ಆದರೆ ಭಾವನೆಗಳು, ಕನಸುಗಳು, ವಿಚಾರಗಳು ಎಂದೂ ಸಾಯಲಾರವು.
- ನೇತಾಜಿ ಸುಭಾಷ್‍ಚಂದ್ರ ಬೋಸ್

99.
ನಂಬಿಕೆಯೇ ಜೀವನ. ಸಂಶಯವೇ ಮರಣ. ನಂಬಿಕೆ ಅದ್ಭುತ ಕಾರ್ಯವನ್ನು ಸಾಧಿಸಿದರೆ ಸಂಶಯ ಸರ್ವನಾಶಕ್ಕೆ ಕಾರಣವಾಗುತ್ತದೆ.
- ರಾಮಕೃಷ್ಣ ಪರಮಹಂಸ

100.
ನಿಷ್ಕಳಂಕರೂ ಸ್ವಚ್ಛ ನಡವಳಿಕೆಯವರೂ ಮತ್ತು ಪ್ರಖರ ದೇಶಭಕ್ತರೂ ಆದ ವ್ಯಕ್ತಿಗಳ ದೇಶವ್ಯಾಪಿ ಸಂಘಟನೆಯೊಂದನ್ನು ಕಟ್ಟುವುದೇ ಸಂಘದ ಉದ್ದೇಶ.
- ಪರಮ ಪೂಜನೀಯ ಶ್ರೀ ಗುರೂಜಿ

101.
ಪರ ಸಂಸ್ಕೃತಿಗಳ ಪಡಿಯಚ್ಚಾಗುವುದಕ್ಕಿಂತ ದೊಡ್ಡ ರಾಷ್ಟ್ರೀಯ ಅಪಮಾನ ಇನ್ನೊಂದಿಲ್ಲ.
- ಪರಮ ಪೂಜನೀಯ ಶ್ರೀ ಗುರೂಜಿ

102.
ಸಂಘಟನೆ ಎಂದರೆ ಮನಗಳನ್ನು ಗೆಲ್ಲುವುದು, ಮನದೊಂದಿಗೆ ಮನವನ್ನು ಜೋಡಿಸುವುದು, ಸ್ವಂತದ ವ್ಯಕ್ತಿತ್ವವನ್ನು ಪೂರ್ತಿ ಮರೆತು ಬಿಡುವುದು.
- ಪರಮ ಪೂಜನೀಯ ಶ್ರೀ ಗುರೂಜಿ

103.
ಕಣ್ಣೆದುರಿಗೆ ಪವಿತ್ರವಾದ ಧ್ಯೇಯವಿರಲಿ. ಅದಕ್ಕಾಗಿ ದುಡಿಯುವ ಇಲ್ಲವೇ ಮಡಿಯುವ ದೃಢ ಸಂಕಲ್ಪವಿರಲಿ. ಆಗ ಮಾತ್ರ ಸ್ವಾರ್ಥವು ಕಸದಂತೆ ದೂರವಾದೀತು.
- ಪರಮ ಪೂಜನೀಯ ಶ್ರೀ ಗುರೂಜಿ

104.
ಸತ್ಯ, ಧರ್ಮ ಹಾಗೂ ನಿಷ್ಠೆ - ಈ ಗುಣಗಳನ್ನು ಹೃದಯದಲ್ಲಿ ಧರಿಸಿದವನಿಗೆ ಎಂದೂ ಸೋಲಿಲ್ಲ.
- ಲೋಕಮಾನ್ಯ ತಿಲಕ್

105.
ಪ್ರತಿಯೊಬ್ಬ ಸ್ವಯಂಸೇವಕನೂ ಮಿತ್ರನಾಗಲಿ. ಪ್ರತಿಯೊಬ್ಬ ಮಿತ್ರನೂ ಸ್ವಯಂಸೇವಕನಾಗಲಿ.
- ಪರಮ ಪೂಜನೀಯ ಶ್ರೀ ಗುರೂಜಿ

106.
ಕಾರ್ಯವೊಂದರ ಗುರಿಯು ಶ್ರೇಷ್ಠವಾಗಿದ್ದರಷ್ಟೇ ಸಾಲದು. ಅದನ್ನು ಸಾಧಿಸ ಹೊರಡುವವರಲ್ಲಿ ಬಲಿಷ್ಠ ಹೃದಯಗಳೂ ಬಲವಾದ ತೋಳುಗಳೂ ಬೇಕು.
- ಪರಮ ಪೂಜನೀಯ ಡಾಕ್ಟರ್‌ಜಿ

107.
ಒಣಹೊರಟೆ ಅಥವಾ ಕೃತಿಶೂನ್ಯ ಸಿದ್ಧಾಂತಗಳಿಂದ ಈವರೆಗೆ ಯಾವ ಮಹತ್ಕಾರ್ಯವೂ ಆಗಿಲ್ಲ. ಮುಂದೆ ಆಗುವುದೂ ಅಸಂಭವ.
- ಪರಮ ಪೂಜನೀಯ ಡಾಕ್ಟರ್‌ಜಿ

108.
ಸರ್ವಪ್ರಯತ್ನದಿಂದ ತನ್ನ ದುರ್ಬಲತೆಯನ್ನು ತೊಡೆದುಹಾಕಿ ಬಲಿಷ್ಠವಾಗುವುದೇ ದುರ್ಬಲ ಸಮಾಜವೊಂದರ ಅತಿ ಶ್ರೇಷ್ಠ ಕರ್ತವ್ಯ.
- ಪರಮ ಪೂಜನೀಯ ಡಾಕ್ಟರ್‌ಜಿ

109.
ಸೇವೆಗೆ ಮುಂದಾಗುವ ಮೊದಲು ಪ್ರೀತಿಸುವುದನ್ನು ಕಲಿಯಬೇಕು. ಪ್ರೀತಿಯೇ ಇಲ್ಲದೆ ಸೇವೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ.
- ಡಾ|| ಅಂಬೇಡ್ಕರ್

110.
ಜನರ ನಡುವೆ ಸರಿಸಮಾನತೆಯನ್ನು ಬೋಧಿಸುವುದೇ ಸದ್ಧರ್ಮ.
- ಡಾ|| ಅಂಬೇಡ್ಕರ್

111.
ಪರಿಸ್ಥಿತಿಯನ್ನು ಕಾಲಕೆಳಗೆ ಮೆಟ್ಟಿ ನಿಲ್ಲಬಲ್ಲವನೇ ಪುರುಷನಾಗಲು ತಕ್ಕವನು.
- ಭಗಿನಿ ನಿವೇದಿತಾ

112.
ದುಡಿ, ಮೈ ಮುರಿದು ದುಡಿ. ಹೆಚ್ಚು ಹೆಚ್ಚಾಗಿ ದುಡಿ. ಆ ನಿನ್ನ ದುಡಿಮೆಯಲ್ಲಿ ಕ್ರಮವಿರಲಿ, ನಿಯಮವಿರಲಿ, ಗುರಿ ಇರಲಿ, ವಿವೇಚನೆ ಇರಲಿ, ದಕ್ಷತೆ ಇರಲಿ.
- ಮೋಕ್ಷಗುಂಡಂ ವಿಶ್ವೇಶ್ವರಯ್ಯ

113.
ತನಗೇನು ತಿಳಿದಿದೆ ಮತ್ತು ತನಗೇನು ತಿಳಿದಿಲ್ಲ ಎಂದು ತಿಳಿದವನು ಮಾತ್ರ ಯಶಸ್ಸು ಪಡೆಯಬಲ್ಲ.
- ವಿದುರ

114.
’ಅಯ್ಯಾ’ ಎಂದರೆ ಸ್ವರ್ಗ; ’ಎಲವೋ’ ಎಂದರೆ ನರಕ.
- ಬಸವಣ್ಣ

115.
ಅಸ್ಪೃಶ್ಯತೆ ತಪ್ಪಲ್ಲದಿದ್ದಲ್ಲಿ ಜಗತ್ತಿನಲ್ಲಿ ಯಾವುದೂ ತಪ್ಪಲ್ಲ.
- ಶ್ರೀ ಬಾಳಾಸಾಹೆಬ ದೇವರಸ್

116.
ಅವರಿವರೆಂಬ ಭೇದವಿಲ್ಲದೆ ಎಲ್ಲರೊಡನೆ ಹಿತವಾಗಿ ಬೆರೆಯುವವರಿಗೆ ಎಂದಿಗೂ ದುಃಖವಿಲ್ಲ, ದಾರಿದ್ರ್ಯವಿಲ್ಲ, ಶತ್ರುಗಳಿಲ್ಲ.
- ತಿರುವಳ್ಳುವರ್

117.
ಜಾಗೃತನಾಗು. ಆಲಸ್ಯವನ್ನು ಕಿತ್ತೊಗೆ. ಧರ್ಮಮಾರ್ಗದಲ್ಲೇ ನಡೆ. ಅಧರ್ಮವನ್ನು ಎಂದೂ ಆಚರಿಸದಿರು.
- ಗೌತಮ ಬುದ್ಧ

118.
ರಾಷ್ಟ್ರವು ಬಲಶಾಲಿಯಾಗುವುದು ಸಣ್ಣಪುಟ್ಟ ವಿಚಾರಗಳನ್ನುಳ್ಳ ದೊಡ್ಡ ದೊಡ್ಡ ವ್ಯಕ್ತಿಗಳಿಂದಲ್ಲ; ದೊಡ್ಡ ದೊಡ್ಡ ವಿಚಾರಗಳನ್ನುಳ್ಳ ಸಣ್ಣ ಸಣ್ಣ ವ್ಯಕ್ತಿಗಳಿಂದ.
- ಸ್ವಾಮಿ ರಾಮತೀರ್ಥ

119.
ನಿನ್ನ ಮುಖವು ಪ್ರಕಾಶಮಾನವಾಗಬೇಕೆ? ಸದ್ಗುಣಗಳ ನೀರಿನಲ್ಲಿ ಸ್ನಾನ ಮಾಡು. ಸತ್ಯವೆಂಬ ಸುಗಂಧವನ್ನು ಮೈಗೆ ಹಚ್ಚಿಕೋ.
- ಗುರು ನಾನಕ್

120.
ಮನುಷ್ಯನಾಗಿ ಹುಟ್ಟಿದ ಬಳಿಕ ನಿನ್ನ ಹಿಂದೆ ಅಳಿಸಲಾಗದ ಒಳ್ಳೆಯ ಗುರುತುಗಳನ್ನು ಬಿಟ್ಟು ಇಲ್ಲಿಂದ ನಿರ್ಗಮಿಸು.
- ಸ್ವಾಮಿ ವಿವೇಕಾನಂದ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ